1/19/2019

ದೇಶ | ವಿದೇಶ ವಿವರ ಪುಟ

ಸಮ್ಮೇಳನದ ಯಶಸ್ವಿಗೆ ಬೋಸರಾಜು ಮನವಿ ಮಾನ್ವಿ:9 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಯಾತ್ರೆಗೆ ಚಾಲನೆ

Font size -16+

'ಸುದ್ದಿಮೂಲ ವಾರ್ತೆ, ಮಾನ್ವಿ, ಜ.13
ಜನವರಿ 19 ಮತ್ತು 20 ರಂದು ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿ ನಡೆಯುತ್ತಿರುವ ಒಂಭತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಯಾತ್ರೆಗೆ ಶನಿವಾರ ಮಾನ್ವಿ ಪಟ್ಟ ಣದ ಬಸವ ವೃತ್ತದ ಬಳಿ ವಿಧಾನ ಪರಿ ಷತ್ತು ಸದಸ್ಯರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎನ್. ಎಸ್.ಬೋಸರಾಜು ಚಾಲನೆ ನೀಡಿ ದರು.
ನಂತರ ಮಾತನಾಡಿದ ಎನ್. ಎಸ್.ಬೋಸರಾಜು ಪೋತ್ನಾಳ್‌ದಲ್ಲಿ ನಡೆಯುವ ಕನ್ನಡ ನುಡಿ ಜಾತ್ರೆಯಲ್ಲಿ ಜಿಲ್ಲೆಯ ಸಾಹಿತಿಗಳು, ಅಭಿಮಾನಿ ಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿ ಸಬೇಕೆಂದು ಮನವಿ ಮಾಡಿದರು.
ಈ ರಥ ಯಾತ್ರೆಯು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ, ಸಮ್ಮೇಳನದ ಬಗ್ಗೆ ಪ್ರಚಾರ ಮಾಡ ಲಿದೆ. ಈ ಪ್ರಚಾರದ ಮೂಲಕ ಜಿಲ್ಲೆ ಯ ಎಲ್ಲಾ ತಾಲೂಕುಗಳ ಜನರಿಗೆ ಸಂದೇಶ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿ ದರು.
ಶಾಸಕರು ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ಹಂಪಯ್ಯ ನಾಯಕ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟ ದೂರು ಸಮ್ಮೇಳನ ಹಾಗೂ ರಥ ಯಾತ್ರೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಯೋ ಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ಎಪಿಎಂಸಿ ಅಧ್ಯಕ್ಷ ಬೀರಪ್ಪ ಕಡದಿನ್ನಿ, ಪುರಸ ಭೆಯ ಮಾಜಿ ಅಧ್ಯಕ್ಷರಾದ ಕೆ.ಬಸ ವಂತಪ್ಪ, ಅಬ್ದುಲ್ ಗಫೂರ್‌ಸಾಬ್, ಮುಖಂಡರಾದ ಮಹಾಂತೇಶ ಸ್ವಾಮಿ ರೌಡೂರು, ಎಂ.ಮಲ್ಲಿಕಾ ರ್ಜುನ ಪೋತ್ನಾಳ್, ನವೀನ್ ನಾಡ ಗೌಡ, ವಿ.ಬಿ.ಬಸವರಾಜಗೌಡ ಪೋತ್ನಾಳ್, ಕಸಾಪ ತಾಲೂಕಾಧ್ಯಕ್ಷ ಮೂಕಪ್ಪ ಕಟ್ಟಿಮನಿ, ಜಿಲ್ಲಾ ಗೌರವ ಕಾರ್ಯ ದರ್ಶಿ ಭೀಮನಗೌಡ ಇಟ ಗಿ, ಕಸಾಪ ಜಿಲ್ಲಾ ಪದಾಧಿಕಾರಿಗಳಾದ ಮಹಾದೇ ವಪ್ಪ, ಶ್ರೀಶೈಲಗೌಡ, ಸುರೇಶ ಕುರ್ಡಿ, ಕಸಾಪ ತಾಲೂಕಾ ಪದಾಧಿಕಾರಿಗಳಾದ ರಮೇಶಬಾಬು ಯಾಳ ಗಿ, ಪಿ.ಪರಮೇಶ,
ದೇವಯ್ಯ ಸ್ವಾಮಿ, ಎಂ.ವೀ ನಗೌಡ ಪೋತ್ನಾಳ್ ವಕೀ ಲರು, ಗುಮ್ಮಾ ಬಸವರಾಜ ವಕೀಲ ರು, ಹಂಪಣ್ಣ ಚಂಡೂರು, ಕೆ.ಈ. ನರಸಿಂಹ, ತಾಯಪ್ಪ ಬಿ.ಹೊಸೂ ರು, ಮಹ್ಮದ್ ಮುಜೀಬ್, ಹ್ಯಾರಿಸ್ ಕೊಟ್ನೆಕಲ್, ಶರಣೇಗೌಡ ಯರದೊ ಡ್ಡಿ, ಎಂ.ಡಿ.ಆಸೀಫ್ ಹುಸೇನ್ ವಕೀಲರು, ಸೂಗುರೆಡ್ಡಿ ಪೋತ್ನಾಳ್, ಶ್ರೀಕಾಂತ ಪಾಟೀಲ್ ಗೂಳಿ, ಡಿ.ಬಸನಗೌಡ, ಇಬ್ರಾಹಿಂ ಖುರೇ ಶಿ, ಮಧು ಪಾಂಡೆ, ಗೋಪಿ ಕಾ ಶ್ರೀನಿವಾಸ, ಅಮೃತಾ, ಈರಮ್ಮ ಸೇರಿದಂತೆ ನೂರಾರು ಕಾರ್ಯಕ ರ್ತರು, ಸದಸ್ಯರು ಇದ್ದರು.'