1/19/2019

ದೇಶ | ವಿದೇಶ ವಿವರ ಪುಟ

ಬಸವರಾಜಸ್ವಾಮಿಗೆ ಪಾಪು ಪ್ರಶಸ್ತಿ

Font size -16+

'ಸುದ್ದಿಮೂಲ ವಾರ್ತೆ, ಬೆಂಗಳೂರು, ಜ.13
ಕರ್ನಾಟಕ ಕಾರ‌್ಯನಿರತ ಪತ್ರಕರ್ತರ ಸಂಘದ 2017-18 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದೆ.
ಸುದ್ದಿಮೂಲ ಪತ್ರಿಕೆಯ ಸಂಪಾದಕ ಬಸವರಾಜಸ್ವಾಮಿಯವರಿಗೆ ಪಾಟೀಲ್ ಪುಟ್ಟಪ್ಪ ಪ್ರಶಸ್ತಿ, ಬಳ್ಳಾರಿಯ ಆಕಾಶವಾಣಿ ವರದಿಗಾರ ವೀರಭದ್ರ ಗೌಡರಿಗೆ ಜಯಶೀಲರಾವ್ ಪ್ರಶಸ್ತಿ ಮತ್ತು ಪ್ರಜಾವಾಣಿ ವರದಿಗಾರ ಬಸವರಾಜ ಹವಾಲ್ದಾರರಿಗೆ ಮಂಡಿಬೆಲೆ ಶ್ಯಾಮಣ್ಣ ಪ್ರಶಸ್ತಿ ಸೇರಿದಂತೆ ರಾಜ್ಯದ ಅನೇಕರ ಪತ್ರಕರ್ತರಿಗೆ ಸಂಘದ ಪ್ರಶಸ್ತಿ ಪ್ರಕಟಿಸಲಾಗಿದೆ.
ಕರ್ನಾಟಕ ಕಾರ‌್ಯನಿರತ ಪತ್ರಕರ್ತರ ಸಂಘದ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನವು ಜ.20 ಮತ್ತು 21 ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.'