1/19/2019

ದೇಶ | ವಿದೇಶ ವಿವರ ಪುಟ

ಗುರುಮಠಕಲ್‌ನಲ್ಲಿ ಮಾನಸಿಕ ಅಸ್ವಸ್ಥನಿಂದ ಫೈರಿಂಗ್ ವ್ಯಕ್ತಿಯ ದೇಹಕ್ಕೆ ಹೊಕ್ಕ ಗುಂಡು, ಆಸ್ಪತ್ರೆಗೆ ದಾಖಲು

Font size -16+

'ಸುದ್ದಿಮೂಲ ವಾರ್ತೆ
ಗುರುಮಠಕಲ್, ಜ.13
ಮಾನಸಿಕ ಅಸ್ವಸ್ಥ ಎಂದು ಹೇಳ ಲಾಗುತ್ತಿರುವ ಯುವಕ ತನ್ನ ಬಳಿ ಯಿದ್ದ ಬಂದೂಕಿನಿಂದ 5 ಸುತ್ತು ಗುಂಡು ಹಾರಿಸಿದ ಪರಿಣಾಮ ವ್ಯಕ್ತಿ ಯೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಗಡಿ ಮೊಹಲ್ಲಾ ಬಡಾ ವಣೆಯಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಕಾಡು ಪ್ರಾಣಿಗಳ ರಕ್ಷಣೆ ಗಾಗಿ ಬಳಕೆ ಮಾಡುವ ಬಂದೂಕಿ ನಿಂದ (ಎಸ್.ಬಿ.ಎಂ.ಎಲ್ ಬಂದೂ ಕು, ಎಂ..ಎ.ಎಫ್- 587-79) ಗಡಿಮೊಹಲ್ಲಾ ಬಡಾವಣೆಯ ನಿವಾಸಿ ಅಸಾದ್ ಅಬ್ದುಲ್ಲಾ ಎನ್ನುವ ಗುಂಡು ಹಾರಿಸಿ ದ್ದಾನೆ. ಇದೇ ವೇಳೆ ನಮಾಜ್ ಮಾಡಿ ಮನೆಗೆ ಹಿಂದಿರುಗುತ್ತಿದ್ದ ಪಕ್ಕದ ಮನೆಯ ನಿವಾಸಿ ಜಮೀಲ್ ಬಿನ್ ಮುಬಾರಕ್ ಎನ್ನುವವರಿಗೆ ಗುಂಡು ತಾಗಿದ್ದು, ಅವರು ತೀವ್ರ ಗಾ ಯಗೊಂಡಿದ್ದಾರೆ. ತಕ್ಷಣವೇ ಅವರ ನ್ನು ಕಲಬುರಗಿಯ ಚಿರಾಯು ಆಸ್ಪ ತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಬಂದೂಕಿನ ಬ್ಯಾರೆಲ್‌ನಲ್ಲಿ ಮದ್ದುಪುಡಿಯ ಜೊತೆಗೆ ಹಾಕ ಲಾಗಿದ್ದ ಐದು ಉಕ್ಕಿನ ಗುಂಡುಗಳಲ್ಲಿ ಎರಡು ಜಮೀಲ್ ಬಿನ್ ಮುಬಾರಕ್ ಅವರ ದೇಹಕ್ಕೆ ತಾಕಿವೆ ಎಂದು ಸ್ಥಳೀ ಯರು ತಿಳಿಸಿದ್ದಾರೆ. ಸುದ್ದಿ ತಿಳಿಯು ತ್ತಿದ್ದಂತೆ ಘಟನೆ ಸ್ಥಳಕ್ಕೆ ಆಗಮಿಸಿದ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಟಾ ಧಿಕಾರಿ ಯಡಾ ಮಾರ್ಟಿನ್ ಮ್ಯಾಂ ಬರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಂಡು ಹಾರಿಸಿದ ಅಸಾದ್ ಅಬ್ದುಲಾ ಅವರನ್ನು ವಶಕ್ಕೆ ಪಡೆದಿ ರುವ ಪೊಲೀಸರು ತನಿಖೆ ನಡೆಸಿದ್ದಾರೆ. ಈತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದ್ದು, ಪೊಲೀ ಸರ ತನಿಖೆಯಿಂದ ಮಾತ್ರ ಸತ್ಯಾಂಶ ಹೊರ ಬರಲಿದೆ. ಗುರುಮಠಕಲ್ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.'