1/19/2019

ದೇಶ | ವಿದೇಶ ವಿವರ ಪುಟ

ವಿಜೃಂಭಣೆಯಿಂದ ನಡೆದ ರೇಸ್ ಸಂಭ್ರಮ

Font size -16+

'ಸುದ್ದಿಮೂಲ ವಾರ್ತೆ, ರಾಯಚೂರು, ಜ.13
ರೇಸ್ ಕಾನ್ಸೆಪ್ಟ್ ಶಾಲೆ,ರಾಯಚೂರಿನಲ್ಲಿ ಜ.11 ಮತ್ತು 12 ರಂದು ರೇಸ್ ಸಂಭ್ರಮ ಎಂಬ ಶೀರ್ಷಿಕೆ ಅಡಿಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು.
ಜ.11 ರಂದು ಜಿಲ್ಲಾ ಸೆಷನ್ ನ್ಯಾಯಾಧೀಶ ಮಹದೇವಯ್ಯನವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸ್‌ರಾಜು,ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಹಾಗೂ ಆರ್‌ಡಿಎ ಆಯುಕ್ತ ಚಿದಾನಂದ್ ಮತ್ತಿತರರು ಭಾಗವಹಿಸಿದ್ದರು.
ಜ.12ರಂದು ನಗರದ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ರೇಸ್ ಶಾಲೆಯು ಇಂದು ವಾರ್ಷಿಕೋತ್ಸವ ಆಚರಿಸಲಿದ್ದು ಮೆಚ್ಚುಗೆಯಾಗಿದ್ದು ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಶತಮಾನೋತ್ಸನವ ಆಚರಿಸಲೆಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ಜಿ.ಪಂ. ಸದಸ್ಯೆ ಸೌಮ್ಯ ಹವಾಲ್ದಾರ್ ,ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.ಇದೇ ಹೊತ್ತಿನಲ್ಲಿ ಕಳೆದ ಸಾಲಿನಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿದ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು. ಈ ಎರಡು ದಿನಗಳ ಸಾಂಸ್ಕೃತಿಕೋತ್ಸವದಲ್ಲಿ 5000 ಕ್ಕೂ ಹೆಚ್ಚು ಪೋಷಕರು, ಗಣ್ಯರು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೊಂಡಾ ಕೃಷ್ಣಮೂ ರ್ತಿ,ಪ್ರಾಂಶುಪಾಲ ವೇಣುಗೋಪಾಲ್ ಸುಬ್ಬಯ್ಯ ಉಪಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್, ಜಂಟಿ ಕಾರ್ಯದರ್ಶಿ ಎಂ.ವೆಂಕಟೇಶ್ ಹಾಗು ನಿರ್ದೇಶಕ ಚಂದ್ರಮೋಹನ್ ರೆಡ್ಡಿ ಶಾರದಾ ದೇವಿಯವರು ಮತ್ತಿತರರು ಉಪಸ್ಥಿತರಿದ್ದರು.'