1/19/2019

ದೇಶ | ವಿದೇಶ ವಿವರ ಪುಟ

ರೈಲು ನಿಲುಗಡೆಗೆ ವಾಯವ್ಯ ಸಾರಿಗೆ ಸಂಸ್ಥೆಗೆ ಪತ್ರ ಬರೆದ ಸಿಎಂ ಅಧೀನ ಕಾರ್ಯದರ್ಶಿ

Font size -16+

'ಸುದ್ದಿಮೂಲ ವಾರ್ತೆ, ಕೊಪ್ಪಳ, ಜ.13
ಸಾರ್ವಜನಿಕರು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ಪತ್ರಬರೆಯುತ್ತಾರೆ. ಆದರೆ, ರೈಲ್ವೆ ನಿಲುಗಡೆಗೆ ವಾಯವ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರಿಗಳು ಪತ್ರ ಬರೆಯುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಸಂಸ್ಥೆಗೆ ಪತ್ರ ಬರೆದಿರುವುದು ಈಗ ಅಧಿಕಾರಿಗಳ ಬುದ್ದಿವಂತಿಕೆ ಬಗ್ಗೆ ಜನರು ನಗುವಂತೆ ಮಾಡಿದೆ.
ಹೌದು, ಜಿಲ್ಲೆಯ ಯಲಬು ರ್ಗಾ ತಾಲೂಕಿನ ಯರೇಹಂಚಿನಾಳ, ಬಿನ್ನಾಳ, ಮಾಳೆಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳು ಗದಗ ಜಿಲ್ಲೆಯ ಗಡಿಭಾಗದಲ್ಲಿವೆ. ಆದರೆ ಗದಗ ಗಡಿ ಭಾಗದ ಹರ್ಲಾಪುರ ಗ್ರಾಮ ಈ ಎಲ್ಲ ಗ್ರಾಮಗಳಿಗೆ ತೀರ ಸಮೀಪವಾಗಿವೆ. ಗ್ರಾಮಸ್ಥರೆಲ್ಲರ ವ್ಯಾಪಾರ, ವಹಿವಾಟು ಗದಗ ಜಿಲ್ಲೆಯೊಂದಿಗೆ ನಡೆಯು ತ್ತಿದ್ದು, ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಗದಗ ಅವಲಂಬಿ ಸಿದ್ದಾರೆ. ಆದ್ದರಿಂದ 6-7 ಗ್ರಾಮ ಗಳಿಗೆ ಅನುಕೂಲವಾಗುವ ಗದಗ ಜಿಲ್ಲೆಯ ಹರ್ಲಾಪುರ ರೈಲ್ವೆ ನಿಲ್ದಾಣದಲ್ಲಿ ಹಂಪಿ ಎಕ್ಸ್‌ಪ್ರೆಸ್, ಹುಬ್ಬಳ್ಳಿ- ತಿರುಪತಿ ಪ್ಯಾಸೆಂಜರ್ ಹಾಗೂ ಹುಬ್ಬಳ್ಳಿ- ಚಿಕ್ಕಬೆಣಕಲ್ ಪ್ಯಾಸೆಂಜರ್ ರೈಲು ಸಂಚಾರ ನಿಲುಗಡೆ ಮಾಡುವಂತೆ ರೈತ ಸಂಘದ ತಾಲೂಕಾಧ್ಯಕ್ಷ ಅಂದಪ್ಪ ಕೋಳೂರು ಅವರು ಇತ್ತೀಚೆಗೆ ಮುಖ್ಯಮಂ ತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಹುಬ್ಬಳ್ಳಿ -ತಿರುಪತಿ ರೈಲು ಆಂಧ್ರಪ್ರದೇಶದಲ್ಲಿ ಚಲಿಸುವ ವೇಳೆಯಲ್ಲಿ ಸಣ್ಣ ಗ್ರಾಮಗಳ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ. ಆದರೆ ಬೇಡಿಕೆ ಇರುವ ಹರ್ಲಾಪುರ ಗ್ರಾಮದಲ್ಲಿ ನಿಲುಗಡೆಯಾದರೆ ರೈತರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ಅನುಕೂಲವಾಗುತ್ತದೆ. ಈಗಾಗಲೇ ಸತತ ನಾಲ್ಕು ವರ್ಷಗಳಿಂದ ಮನವಿ ಸಲ್ಲಿಸುತ್ತ ಬರಲಾಗಿದೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಎಂ ಅವರಿಗೆ ಗದಗಿಗೆ ಆಗಮಿಸಿದ ವೇಳೆಯಲ್ಲಿ ಮನವಿ ಸಲ್ಲಿಸಿದ್ದರು. ಅಲ್ಲದೇ ರೈಲ್ವೆ ನಿಲುಗಡೆ ಕುರಿತಂತೆ ಅಂಚೆ ಮೂಲಕವೂ ಪತ್ರ ಬರೆಯಲಾಗಿದೆ.
ರೈತ ಸಂಘದ ಅಧ್ಯಕ್ಷನ ಪತ್ರಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಅವರ ಅಧೀನ ಕಾರ್ಯದರ್ಶಿ (ಆಡಳಿತ) ಅರುಣ್ ಅವರು ಸ್ಪಂದಿಸಿದ್ದಾರೆ. ಆದರೆ ಅವರು ಬರೆದಿರುವ ಪತ್ರ ಅಚ್ಚರಿ ಮೂಡಿಸುತ್ತದೆ. ರೈಲು ನಿಲುಗಡೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಇಲ್ಲವೆ ರೈಲ್ವೆ ಇಲಾಖೆಗೆ ಅವರು ಬರೆಯಬಹುದಾಗಿತ್ತು. ಮನವಿಯ ಪೂರ್ಣವಾಗಿ ಮನನ ಮಾಡಿಕೊಳ್ಳದೆ ಜುಲೈ 7 ರಂದು ಹುಬ್ಬಳ್ಳಿಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ಹರ್ಲಾಪುರ ರೈಲ್ವೆ ನಿಲ್ದಾಣಕ್ಕೆ 3 ಗಾಡಿಗಳನ್ನು ನಿಲುಗಡೆ ಮಾಡುವು ದರ ಬಗ್ಗೆ ತಮ್ಮ ಮನವಿಯನ್ನು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಪತ್ರ ಸಂಖ್ಯೆ 38097/ಆರ್‌ಇಪಿ-ಜಿಇಎನ್/2017 ದಿನಾಂಕ 6-7-2017 ರಂದು ನಿಲುಗಡೆಗಾಗಿ ಪತ್ರ ಕಳುಹಿಸಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಅವರಿಂದ ಮಾಹಿತಿ ಪಡೆಯಲು ಕೋರಿದೆ ಎಂದು ಸಿಎಂ ಕಚೇರಿಯಿ ಂದ ಬರೆದಿರುವ ಪತ್ರದಲ್ಲಿ ಅಧೀನ ಕಾರ್ಯದರ್ಶಿ (ಆಡಳಿತ) ಅರು ಣ್ ತಿಳಿಸಿದ್ದಾರೆ.
ಈ ಪತ್ರದ ಪ್ರತಿ ಯೊಂದನ್ನು ರೈತ ಸಂಘದ ಅಧ್ಯಕ್ಷ ಅಂದಪ್ಪ ಕೂಳೂರು ಅವರಿಗೆ ಕಳಿಸಿದ್ದಾರೆ. ಈ ಪತ್ರವನ್ನು ನೋಡಿದ ಅಂದಪ್ಪ ಅಧಿಕಾರಿಗಳಿಗೆ ಎಂತಹ ತಲೆ ಇದೆ ಎಂದು ಮನದೊಳಗೆ ಮುಸಿ ಮುಸಿ ನಕ್ಕಿದ್ದಾನೆ. ಸಂಬಂಧವಿಲ್ಲ ದವರಿಗೆ ಪತ್ರ ಬರೆದಿರೋದು ಈಗ ಸಾರ್ವಜನಿಕರು ಅಧಿಕಾರಿಗಳ ಶ್ಯಾ ಣ್ಯಾತನ ಕಂಡು ಅಪಹಾಸ್ಯ ಮಾಡುವಂತಾಗಿದೆ.'