6/22/2019

ದೇಶ | ವಿದೇಶ ವಿವರ ಪುಟ

ಮಾಧ್ಯಮ ಅಕಾಡೆಮಿಗೆ ರಾಜಶೇಖರ ಕೋಟಿ, ನಾಗರಾಜ ಸೇರಿ 10 ಪತ್ರಕರ್ತರ ನೇಮಕ

Font size -16+

'ಸುದ್ದಿಮೂಲ ವಾರ್ತೆ, ರಾಯಚೂರು, ಜು.29
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನವಾಗಿ 10 ಸದಸ್ಯರನ್ನು ನೇಮಕ ಮಾಡಲಾಗಿದೆ.
ಹಿರಿಯ ಪತ್ರಕರ್ತ ಹಾಗೂ ಮೈಸೂರಿನ ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ, ಈಶಾನ್ಯ ಟೈಮ್ಸ್ ಪತ್ರಿಕೆ ಸಂಪಾದಕ ಎನ್.ನಾಗರಾಜ, ಎಚ್.ಬಿ.ಮದನಗೌಡ ಹಾಸನ, ಎನ್.ರವಿಕುಮಾರ್ ಶಿವಮೊಗ್ಗ , ಲಿಂಗಪ್ಪ ಚಾವಡಿ ಹಾವೇರಿ, ಕೆ.ಎಸ್.ಗಣೇಶ ಕೋಲಾರ, ಎಂ.ಯು.ವೆಂಕಟೇಶಯ್ಯ ಬೆಂಗಳೂರು, ಗಣೇಶ ಕದಂ ಧಾರವಾಡ, ಗಂಗಾಧರ ಹಿರೇಗುತ್ತಿ ಕಾರವಾರ ಮತ್ತು ಬೆಂಗಳೂರು, ಮಂಗಳೂರು ಮಹಿಳಾ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರನ್ನು ಸದಸ್ಯರನ್ನಾಗಿ ನೇಮಿಸಿದೆ.
ಐದನೇ ಬಾರಿ ಅವಕಾಶ : ರಾಯಚೂರು ಜಿಲ್ಲೆಗೆ ಮಾಧ್ಯಮ ಅಕಾಡೆಮಿಯಲ್ಲಿ ಐದನೇ ಬಾರಿ ಅವಕಾಶ ದೊರೆತಿದ್ದು ಸಂತಸ ಮೂಡಿಸಿದೆ.
ಈ ಹಿಂದೆ ಬಸವರಾಜಸ್ವಾಮಿ, ಬಿ.ವೆಂಕಟಸಿಂಗ್, ಚೆನ್ನ ಬಸವಣ್ಣ ಸದಸ್ಯರಾಗಿದ್ದು ಪ್ರಸ್ತುತ ಆಡಳಿತ ಮಂಡಳಿಯಲ್ಲಿ ಬಿ.ವೆಂಕಟಸಿಂಗ್ ಸದಸ್ಯರಾಗಿದ್ದು ಜೊತೆಗೆ ಈಗ ಎನ್.ನಾಗರಾಜ ಅವರನ್ನು ನೇಮಕ ಮಾಡಿರುವುದು ಜಿಲ್ಲೆಯ ಪತ್ರಿಕಾ ಚಟುವಟಿಕೆಗಳ ಉತ್ತೇಜನಕ್ಕೆ ಸಹಕಾರ ಮಾಡಿದಂತೆ ಆಗಿದೆ.'